ನಮಸ್ಕಾರ. ನನ್ನ ವೆಬ್‌ಸೈಟಿಗೆ ಸುಸ್ವಾಗತ. ನನ್ನ ಹೆಸರು ರಾಜೀವ್ ಗೌಡ. ನಾನು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಬೆಂಗಳೂರಿನಲ್ಲಿ ಪ್ರೊಫೆಸರಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ನಾನು ವಾರ್ಟನ್ ಮತ್ತು ಬರ್ಕ್‌ಲಿ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ನಡೆಸಿದರೂ ನಾನು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿಯೆ. ನಿಮ್ಮೆಲ್ಲರಂತೆ ನಮ್ಮ ನಗರಕ್ಕೆ ಅತ್ಯುತ್ತಮ ಸೌಕರ್ಯಗಳು ಸಿಗಬೇಕೆಂದು ಆಗ್ರಹಿಸುತ್ತಿದ್ದೇನೆ. ಅತ್ಯುತ್ತಮ ಗುಣಮಟ್ಟದ ಮೂಲಭೂತ ಸೌಕರ್ಯಗಳಾದ ಹೆದ್ದಾರಿ, ರೈಲುನಿಲ್ದಾಣ ಮತ್ತು ಪರಿಸರಕ್ಕೆ ಪೂರಕವಾದಂತಹ ಅಭಿವೃದ್ಧಿ ಕಾಮಗಾರಿಗಳು ಬೆಂಗಳೂರಿಗೆ ದೊರೆಯಬೇಕು. ಬದಲಾಗುತ್ತಿರುವ ಕೆಲಸದ ಅಗತ್ಯಗಳನ್ನು ಸರಿದೂಗಿಸುವಂಥ ಉತ್ತಮ ಶೈಕ್ಷಣಿಕ ವ್ಯವಸ್ಥೆ ಸಿಗಬೇಕು. ನಮ್ಮ ಜನತೆಗೆ ಸುರಕ್ಷತೆ, ರಕ್ಷಣೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಪಾರದರ್ಶಕ ಆಡಳಿತ ದೊರೆಯುವಂತಾಗಬೇಕು. ನಮ್ಮ ರಾಜಕೀಯ ಮತ್ತು ನಗರವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯಲು ರಾಜಕೀಯಕ್ಕಿಳಿಯುವ ಮಹತ್ತರ ಹೆಜ್ಜೆ ಇಡಲು ಸಿದ್ಧನಾಗಿದ್ದೇನೆ. ಇದು ನಾನೊಬ್ಬನೇ ಕ್ರಮಿಸುವಂಥ ಪಯಣವಲ್ಲ. ಇದು ನಮ್ಮೆಲ್ಲರ ಪಯಣ ಮತ್ತು ಇದಕ್ಕೆ ನಿಮ್ಮೆಲ್ಲರ ಅನುಭವ ಮತ್ತು ಪರಿಣತಿಯ ಅಗತ್ಯವಿದೆ. ಬನ್ನಿ, ಎಲ್ಲರೂ ಈ ಪಯಣಕ್ಕೆ ಸಿದ್ಧರಾಗೋಣ.